ಕಾಂತಾರ-2 ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್! ಇದು ಸಿಕ್ವೆಲ್ ಅಲ್ಲ ಪ್ರೀಕ್ವೆಲ್…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಪ್ರೀಕ್ವೆಲ್ ಕಥೆಯ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡು ಸಿನಿಮಾ ಮುಹೂರ್ತ ಫಿಕ್ಸ್ ಆಗಿದ್ದು, ಹೊಂಬಾಳೆ ಸಂಸ್ಥೆ ಸಿಂಪಲ್ ಆಗಿಯೇ ಒಂದು ದೇವಸ್ಥಾನದಲ್ಲಿಯೇ ಚಿತ್ರದ ಮುಹೂರ್ತ ಪ್ಲಾನ್ ಮಾಡಿದೆ.
Kantara Prequel Date Fixed: ಸ್ಯಾಂಡಲ್ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ-2 ಚಿತ್ರದ ಹೊಸ ಸುದ್ದಿ ಹರಿದಾಡುತ್ತಿದ್ದು, ಇದು ಸಿನಿಮಾದ ಮುಹೂರ್ತಕ್ಕೆ ಸಂಬಂಧಿಸಿದ್ದೇ ಆಗಿದೆ. ಕಾಂತಾರ ರಿಲೀಸ್ ಆಗಿ ಹಿಟ್ ಆದ್ಮೇಲೆ ಎಲ್ಲೆಡೆ ಈ ಚಿತ್ರದ ಪಾರ್ಟ್-2 ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಅದೇ ಸರಿಯಾದ ಸಮಯಕ್ಕೆ ರಿಷಬ್ ಶೆಟ್ಟಿ ಒಂದು ಮಾಹಿತಿ ನೀಡಿದ್ದರು. ಇದು ಕಾಂತಾರ ಸಿನಿಮಾದ ಕಥೆ ಮುಂದುವರೆಯುತ್ತಿದ್ದು, ಆದರೆ ಅದು ಸಿಕ್ವೆಲ್ ಆಗಿ ಅಲ್ವೇ ಅಲ್ಲ.
ಹೌದು.. ನಟ ರಿಷಬ್ ಶೆಟ್ಟಿ ಈ ಹಿಂದೆ, ಕಾಂತಾರ-2 ಸಿನಿಮಾ ಪ್ರೀಕ್ವೆಲ್ ಆಗಿಯೇ ಬರುತ್ತದೆ. ಇಲ್ಲಿವರೆಗೂ ನೀವೂ ನೋಡಿರೋದು ಪಾರ್ಟ್-2 ಸಿನಿಮಾನೆ ಆಗಿದೆ. ಆದರೆ ಇನ್ಮುಂದೆ ಬರೋದು ಕಾಂತಾರ ಪ್ರೀಕ್ವೆಲ್ ಕಥೆ ಅಂತಲೇ ಹೇಳಿಕೊಂಡಿದ್ದರು. ಸದ್ಯ ಕಾಂತಾರ ಪ್ರೀಕ್ವೆಲ್ ಚಿತ್ರದ ಕೆಲಸ ನಡೆಯುತ್ತಿದ್ದು, ಒಂದು ಇಡೀ ಟೀಮ್ ಸಂಶೋಧನೆ ಮಾಡಿ, ಅವಶ್ಯಕ ತಯಾರಿಯನ್ನೂ ನಡೆಸಿಕೊಂಡಿದೆ. ಈ ಸಂಶೋಧನಾ ತಂಡದ ಜೊತೆಗೆ ರಿಷಬ್ ಶೆಟ್ಟಿ ಸಹ ಕುಳಿತು, ತಾವು ಅಂದುಕೊಂಡಂತೆ ಆ ಕಥೆಗೆ ಒಂದು ರೂಪ ಕೊಟ್ಟಿದ್ದಾರೆ.
Post Comment