Loading Now

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ.

ಕರ್ನಾಟಕ ವಿಧಾನ ಸಭೆಯು ಸೋಮವಾರ, ದಿನಾಂಕ 04ನೇ ಡಿಸೆಂಬರ್ 2023ರಂದು ಬೆಳಿಗ್ಗೆ 11.00 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ.

16ನೇ ವಿಧಾನ ಸಭೆಯ ಎರಡನೇ ಅಧಿವೇಶನದ ಕಾರ್ಯಕಲಾಪಗಳನ್ನು ಈ ಕೆಳಕಂಡ ದಿನಾಂಕಗಳಂದು ನಡೆಸಲು ನಿಗದಿಪಡಿಸಲಾಗಿದೆ:-

Date 4, 5, 6, 7, 8, 11, 12, 13, 14, ಮತ್ತು 15ನೇ ಡಿಸೆಂಬರ್ 2023

ಸಾರ್ವಜನಿಕ ಹಿತದೃಷ್ಟಿಯ ಪ್ರಶ್ನೆಗಳು / ಸೂಚನೆಗಳನ್ನು ನೀಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ.

ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳನ್ವಯ ಅಧಿವೇಶನದ ನಡುವಿನ ಅವಧಿಯಲ್ಲಿ ಮಾನ್ಯ ಶಾಸಕರು ನೀಡಿರುವ ಪ್ರಶ್ನೆಗಳನ್ನು ಮೇಲಿನ ಉಪವೇಶನಕ್ಕೆ ಪರಿಗಣಿಸಲಾಗುವುದು. ಆ ಪ್ರಶ್ನೆಗಳೂ ಒಳಗೊಂಡಂತೆ, ದಿನವೊಂದಕ್ಕೆ ಗರಿಷ್ಠ ಐದು(5) ಪ್ರಶ್ನೆಗಳನ್ನು ನೀಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ.

ಪ್ರಶ್ನೆಗಳ ಸೂಚನಾ ಪತ್ರಗಳನ್ನು ಸಮೂಹವಾರು ನಿಗದಿಪಡಿಸಿರುವ ದಿನಾಂಕದಂದು ಮಧ್ಯಾಹ್ನ 3.00 ಗಂಟೆಯ ಒಳಗಾಗಿ ಮಾತ್ರ ನೀಡಲು ಅವಕಾಶವಿರುತ್ತದೆ.

ನಿಯಮ 39ರ ಮೇರೆಗೆ ಪ್ರಶ್ನೆಗಳನ್ನು ನೀಡಲು ಇರುವ 15 ದಿನಗಳ ಕಾಲಾವಕಾಶವನ್ನು ಮತ್ತು ನಿಯಮ 41ರ ಮೇರೆಗೆ ಉತ್ತರಗಳನ್ನು ಒದಗಿಸಲು ಇರುವ 10 ದಿನಗಳ ಕಾಲಾವಕಾಶವನ್ನು ಪ್ರಸ್ತುತ ಅಧಿವೇಶನದ ದಿನಾಂಕಗಳ ಅವಧಿಗೆ ಮಾತ್ರ ಪ್ರಶೋತ್ತರ ಕಡಿತಗೊಳಿಸಲಾಗಿರುತ್ತದೆ.

Spread the informaton

Post Comment

You cannot copy content of this page