Loading Now

ನಿಮಗೆ 18 ವರ್ಷ ತುಂಬಿಲ್ಲ ಆದರೂ ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು!!!.. ಹೇಗೆ?

ನಿಮಗೆ 18 ವರ್ಷ ತುಂಬಿಲ್ಲ ಆದರೂ ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು!!!.. ಹೇಗೆ?

How to apply for voter id card?

ಚುನಾವಣಾ ಗುರುತಿನ ಚೀಟಿ (ಮತದಾರರ ಗುರುತಿನ ಚೀಟಿ) ನಾಗರಿಕತ್ವ ಹಾಗೂ ರಾಷ್ಟ್ರೀಯತೆ ನಿರ್ಧರಿಸಲು ನೆರವು ನೀಡುವ ಅತ್ಯಂತ ಮುಖ್ಯ ದಾಖಲೆಯಾಗಿರುತ್ತದೆ. ಭಾರತದ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸಲು ಈ ದಾಖಲೆಯನ್ನು ಮೂಲ ದಾಖಲಾತಿ ಎಂದು ಪರಿಗಣಿಸುತ್ತಾರೆ. ಅದಲ್ಲದೆ ಇನ್ನುಳಿದ ಸರ್ಕಾರಿ ಸೇವೆಯನ್ನು ಪಡೆಯಲು ಚುನಾವಣಾ ಗುರುತಿನ ಚೀಟಿಯನ್ನು ಬಳಸಲಾಗುತ್ತದೆ.

ಅಷ್ಟೇ ಅಲ್ಲದೆ ಪಾಸ್‍ಪೋರ್ಟ್, ಹೊಸ ವಿದ್ಯುತ್ ಸಂಪರ್ಕ, ಹೀಗೆ ಬೇರೆ ಬೇರೆ ಸರ್ಕಾರಿ ಸೌಲಭ್ಯ ಪಡೆಯಲು, ಈ ಗುರುತಿನ ಚೀಟಿಯನ್ನು ಬಳಸಬಹುದು.  ಈ ಚುನಾವಣಾ ಗುರುತಿನ ಚೀಟಿಯನ್ನು ಮತದಾರರ ಎಪಿಕ್ ಕಾರ್ಡ್ Electors Photo Identification Card ಎಂದೂ ಕರೆಯುತ್ತಾರೆ. ಮತದಾರರಿಗೆ ಬೇರೆ ಬೇರೆ ಸಂಖ್ಯೆಯನ್ನು ನೀಡಲಾಗುತ್ತದೆ.

  ಮತದಾರರ ಗುರುತಿನ ಚೀಟಿಗೆ ಎರಡು ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು :


1. ಆನ್‍ಲೈನ್ ವಿಧಾನ: ಮತದಾರರ ಗುರುತಿನ ಚೀಟಿಗೆ ಆನ್‍ಲೈನ್ ನೋಂದಣಿ ಮಾಡಬಹುದು
2. ಆಫ್‍ಲೈನ್ ವಿಧಾನ: ತುಂಬಿದ ಅರ್ಜಿಯನ್ನು ಚುನಾವಣಾ ಆಯೋಗ ನಿರ್ಧರಿಸಿದ ಕಚೇರಿ ಅಂದರೆ ತಹಸೀಲ್ದಾರ್ ಕಚೇರಿಗೆ ಅಥವಾ ಮತಗಟ್ಟೆ ಅಧಿಕರಿಗಳು ಅಥವಾ ಗ್ರಾಮ ಆಡಳಿಾಧಿಕಾರಿ ಕಚೇರಿಗೆ ಸಲ್ಲಿಸಬಹುದು.

ಕರ್ನಾಟಕದಲ್ಲಿ ಮತದಾರರರ ಗುರುತಿನ ಚೀಟಿ ಪಡೆಯಲು  ಈ ಕೆಳಗಿನ ವಿಧಾನ ಅನುಸರಿಸಬೇಕು

ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :
1. ಅರ್ಜಿದಾರರಿಗೆ ಕನಿಷ್ಠ 18 ವಯಸ್ಸು ತುಂಬಿರಬೇಕು ಅಥವಾ 17 ವಯಸ್ಸು ಮೇಲ್ಪಟ್ಟ ವಯಸ್ಸಿನವರು ಸಹ ಆರ್ಜಿ ಸಲ್ಲಿಸಬಹುದು.
2. ಭಾರತದಲ್ಲಿ ಅರ್ಜಿದಾರರಿಗೆ ಶಾಶ್ವತ ವಿಳಾಸದ ದಾಖಲೆ ಇರಬೇಕು
3. ಅರ್ಜಿದಾರರ ಪೋಷಕರ ಹೆಸರು ಭಾರತದ ಮತದಾರರ ಪಟ್ಟಿಯಲ್ಲಿರಬೇಕು.

ಅರ್ಜಿಗಳ ನಮೂನೆ ಹಾಗೂ ವಿವರ:

Form 6 : ಹೊಸ ಮತದಾರರ ನೋಂದಣಿ ಮಾಡಲು

Form 7: ಮತದಾರ ಪಟ್ಟಿಯಿಂದ ತೆಗೆದುಹಾಕಲು

Form 8 : ತಿದ್ದುಪಡಿ ಅಥವಾ ವರ್ಗಾವಣೆ ಅಥವಾ ಕಳೆದುಹೋದ ಮತದಾರರ ಚೀಟಿಗಾಗಿ ಅರ್ಜಿ ಸಲ್ಲಿಸಲು.

Simple steps to follow : ಅತೀ ಜರೂರು ಆಗಿ ಮಾಡಲು ಹೀಗೆ ಮಾಡಿ

Step 1 : ಈ ಜಾಲತಾಣಕ್ಕೆ ಹೋಗಿ https://voters.eci.gov.in/

Step 2 : ನೀವು ನೀಡಬೇಕಾದ ಅರ್ಜೀ ಸಲ್ಲಿಸಿ.

Step 3 : ದಾಖಲಾತಿಯನ್ನು ಅಳವಡಿಸಿ.

Step 4 : submit ಮಾಡಿ ರೆಫರೆನ್ಸ್ ನಂಬರ್ ಪಡೆದುಕೊಳ್ಳಿ.

End

7 ದಿನದ ಒಳಗಾಗಿ ನಿಮ್ಮ ಅರ್ಜಿಯು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಿರುತ್ತದೆ

ನೀವು ನೀಡಿದ ಅರ್ಜಿಯ ಸ್ಥಿತಿ ತಿಳಿಯಲು track voter id application ಯಿಂದ ತಿಳಿದುಕೊಳ್ಳಬಹುದು.


Also see,

How to Apply for Voter ID card in Karnataka

Spread the informaton

Post Comment

You cannot copy content of this page