Loading Now

ಸೌಹಾರ್ದ ಕ್ರಿಕೆಟ್‌ ಟ್ರೋಪಿ ಬೀದರನಲ್ಲಿ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ನೇತೃತ್ವದ ತಂಡ ಅದ್ಭುತ ಗೆಲುವು.

ಸೌಹಾರ್ದ ಕ್ರಿಕೆಟ್‌ ಟ್ರೋಪಿ ಬೀದರನಲ್ಲಿ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ನೇತೃತ್ವದ ತಂಡ ಅದ್ಭುತ ಗೆಲುವು.

ಸೌಹಾರ್ದತೆ ಮತ್ತು ಕ್ರೀಡಾ ಮನೋಭಾವದ ಅತ್ಯಾಕರ್ಷಕ ಪ್ರದರ್ಶನದಲ್ಲಿ, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಒಟ್ಟಾಗಿ ಉತ್ಸಾಹಭರಿತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಈ ಉಪಕ್ರಮವು ಅಧಿಕಾರಿಗಳಲ್ಲಿ ಏಕತೆಯ ಭಾವನೆಯನ್ನು ಬೆಳೆಸುವುದು ಮಾತ್ರವಲ್ಲದೆ ಕೆಲಸದ ಸ್ಥಳದ ಮಿತಿಯ ಹೊರಗೆ ಸೌಹಾರ್ದ ಸ್ಪರ್ಧೆಗೆ ವೇದಿಕೆಯನ್ನು ಒದಗಿಸುತ್ತದೆ.

ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಬೀದರ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಸೌಹಾರ್ದ ಕ್ರಿಕೆಟ್‌ ಟೂರ್ನಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರ ನೇತೃತ್ವದ ತಂಡ ಉತ್ತಮ ಪ್ರದರ್ಶನ ನೀಡಿ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಜಿಲ್ಲಾಧಿಕಾರಿ ತಂಡ ಬ್ಯಾಟಿಂಗ ಆಯ್ಕೆ ಮಾಡಿಕೊಂಡು, ಉತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು 12 ಓವರ್‌ಗಳಲ್ಲಿ 109 ರನ್‌ ಕಲೆ ಹಾಕಿದರು.

ಜಿಲ್ಲಾ ಪೊಲೀಸ್‌ ಇಲಾಖೆಯ ತಂಡಕ್ಕೆ ಜಿಲ್ಲಾಧಿಕಾರಿ ನೇತೃತ್ವದ ತಂಡ 110 ರನ್‌ಗಳ ಗುರಿ ನೀಡಿತ್ತು.

ಚನ್ನಬಸವಣ್ಣ ಎಸ್ ಎಲ್ ಅವರ ನೇತೃತ್ವದ ಪೊಲೀಸ್ ತಂಡ 12 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 105 ರನ್‌ಗಳಷ್ಟೇ ಸೇರಿಸುವ ಮೂಲಕ ಐದು ರನ್‌ಗಳಿಂದ ಸೋಲು ಕಂಡಿತು.

ಜಿಲ್ಲಾಧಿಕಾರಿ ನೇತೃತ್ವದ ತಂಡದಿಂದ ಗೋವಿಂದ ರೆಡ್ಡಿ, ಉಮೇಶ, ಮಂಜುನಾಥ ಅವರು ಉತ್ತಮ ಪ್ರದರ್ಶನ ತೋರಿದರು.ಪೊಲೀಸ್‌ ತಂಡದಿಂದ ತಂಡದ ನಾಯಕ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಇನ್ನಿಂಗ್ಸ್‌ ಆರಂಭಿಸಿ, ಕೊನೆಯ ಒಂದು ಓವರ್‌ ಇರುವಾಗ ಔಟ್‌ ಆದರು.

ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದರು.ಪ್ರಭು ಕೂಡ ಉತ್ತಮ ಬ್ಯಾಟಿಂಗ್‌ ಮಾಡಿ ಇಡೀ ಪಂದ್ಯದ ದಿಕ್ಕು ಬದಲಿಸಿದ್ದರು.ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಇದಕ್ಕೂ ಮುನ್ನ ಎರಡು ನಾಕೌಟ್‌ ಪಂದ್ಯಗಳು ನಡೆದವು. ಪತ್ರಕರ್ತರ ತಂಡ ಹಾಗೂ ಜಿಲ್ಲಾಡಳಿತ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಜಯ ಗಳಿಸಿ, ಫೈನಲ್‌ ಪ್ರವೇಶಿಸಿತು.

ಇನ್ನೊಂದು ಕಡೆ ಪೊಲೀಸ್‌ ಇಲಾಖೆಯ ತಂಡ ಜೆಸ್ಕಾಂ ತಂಡವನ್ನು ಮಣಿಸಿ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿತು. ಪತ್ರಕರ್ತರ ತಂಡವನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಕೆ.ಗಣಪತಿ ಮುನ್ನಡೆಸಿದರೆ, ಜೆಸ್ಕಾಂ ತಂಡವನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಪಾಟೀಲ ಅವರು ಮುನ್ನಡೆಸಿದ್ದರು.

ಟೂರ್ನಿಯಲ್ಲಿ ಭಾಗವಹಿಸಿದ್ದ ಎಲ್ಲಾ ಆಟಗಾರರಿಗೂ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಮಾಧಾನಕರ ಬಹುಮಾನ ನೀಡಲಾಯಿತು.

ಈ ಕ್ರಿಕೆಟ್ ಸಂಭ್ರಮವು ಉದ್ಯೋಗ ಶೀರ್ಷಿಕೆಗಳು ಮತ್ತು ಅಧಿಕಾರಶಾಹಿ ವಿಭಾಗಗಳನ್ನು ಮೀರಿ ಜನರನ್ನು ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬ ಕಲ್ಪನೆಯನ್ನು ಉದಾಹರಿಸುತ್ತದೆ. ಸರ್ಕಾರಿ ಅಧಿಕಾರಿಗಳು ಪೆನ್ನುಗಳ ಬದಲಿಗೆ ಕ್ರಿಕೆಟ್ ಬ್ಯಾಟ್‌ಗಳನ್ನು ಬಳಸುವುದರಿಂದ, ಪಂದ್ಯಾವಳಿಯು ಪರಿಣಾಮಕಾರಿ ಆಡಳಿತಕ್ಕೆ ಅಗತ್ಯವಾದ ಏಕತೆ ಮತ್ತು ತಂಡದ ಕೆಲಸಗಳ ಸಂಕೇತವಾಗಿದೆ.

Spread the informaton

Post Comment

You cannot copy content of this page