Loading Now

ಶಿವಮೊಗ್ಗದ ರಾಗಿಗುಡ್ಡೆಯಲ್ಲಿ ಮುಸ್ಲಿಂ ಯುವಕ ಎನ್ಕೌಂಟರ್? Fake news

ಶಿವಮೊಗ್ಗದ ರಾಗಿಗುಡ್ಡೆಯಲ್ಲಿ ಮುಸ್ಲಿಂ ಯುವಕ ಎನ್ಕೌಂಟರ್? Fake news

Fake news spread in shimogga.

Is muslim boy encountered by shivamogga police?

ಇತ್ತೀಚಿಗೆ ನಡೆದ ಈದ್ ಮಿಲಾದ್ ಹಬ್ಬ ಆಚರಣೆವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲ ಯುವಕರು ಅಲ್ಲಿಯ ನಿವಾಸದ ಮೇಲೆ ಏಕಾ ಏಕಿ ಕಲ್ಲು ತೂರಾಟ ಎಸಗಿದ್ದು ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಪೊಲೀಸ್ ಪಡೆ ಹರಸಾಹಸ ಮಾಡಬೇಕಾಯಿತು ಈ ವೇಳೆ ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಿದ್ದು ನಂತರ ಪೊಲೀಸ್ ಪಡೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಕೆಲ ಕಿಡಿಗೇಡಿಗಳನ್ನು ಭಂದಿಸಲಾಗಿದೆ. ಆದರೆ ಕೆಲ ಹೊತ್ತಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ವಿರುದ್ಧ ಸುಳ್ಳು ಸುದ್ದಿಯನ್ನು ಎಕಾಎಕಿಯಾಗಿ ಹರಡಿಸುತ್ತಿದ್ದರು ಈ ಘಟನೆಯು ಶಿವಮೊಗ್ಗ ಪೊಲೀಸ್ ಅಧಿಕಾರಿಗಳ ಗಮನಕ್ಕ ಬಂದಿದ್ದು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

” ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಪೊಲೀಸ್ ಎನ್ ಕೌಂಟರ್ ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ರೀತಿ ಘಟನೆಯು ನಡೆದಿಲ್ಲ. ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಸಿಇಎನ್ ಠಾಣೆ ಗುನ್ನೆ ಸಂಖ್ಯೆ 98/2023 ರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ ” ಎಂದು ಶಿವಮೊಗ್ಗ ಎಸ್ಪಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Spread the informaton

Post Comment

You cannot copy content of this page