Loading Now

ಮುಧೋಳ ತಾಲೂಕಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯೆ  ಸಿಗುತ್ತಿಲ್ಲ : ಮುಧೋಳ ಜನತೆ ಅಳಲು

ಮುಧೋಳ ತಾಲೂಕಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯೆ  ಸಿಗುತ್ತಿಲ್ಲ : ಮುಧೋಳ ಜನತೆ ಅಳಲು

ಮುಧೋಳ:

ಹೆಚ್ಚಿದ ಕೆಲಸದ ಹೊರೆ, ಅನಿರೀಕ್ಷಿತ ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಸವಾಲುಗಳ ಸಂಯೋಜನೆಯಿಂದ ಕಂದಾಯ ಇಲಾಖೆಯಲ್ಲಿ ಕೆಲಸ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಕಾರ್ಯಗಳ ಉಲ್ಬಣವು ನಮ್ಮ ಸಂಪನ್ಮೂಲಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಿದೆ, ಇದು ದೀರ್ಘ ಪ್ರಕ್ರಿಯೆಯ ಸಮಯಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಅನಿರೀಕ್ಷಿತ ಸಿಬ್ಬಂದಿ ಅನುಪಸ್ಥಿತಿಯು ಗಡುವನ್ನು ಪೂರೈಸುವ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ.


ಈಗ ತಿಳಿದು ಬಂದಂತೆ 4- 5 ವರ್ಷಗಳಿಂದ ಪಹಣಿ ಪತ್ರಿಕೆಗಳಲ್ಲಿ ಕೃಷ್ಣಾ ಮೇಲ್ಪಂಡ ಯೋಜನೆಯೆ ಸಿಗುತ್ತಿಲ್ಲ. ನವೀಕರಣವಾಗುತ್ತಿಲ್ಲ. ಮತ್ತು ಕಳೆದ ನಾಲ್ಕು ವರ್ಷಗಳಿಂದ ಪ್ರವಾಹಕ್ಕೆ ಬೆಳೆಗಳ ಮೇಲೆ ಸಾಲ ನವೀಕರಣ ಆಗುತ್ತಿಲ್ಲ ಮತ್ತು 2019 ರ ಪ್ರವಾಹದಲ್ಲಿ ಸಾಲ ತೀರಿಸಲಾಗದೆ ಭೂಮಿಯ ಡಿಕ್ರೀ ಮಾಡಲು ಸಹ ಸಾಧ್ಯವಾಗುತ್ತಿಲ್ಲ.

ಈಗ ಬಂದ ಮಾಹಿತಿ ಪ್ರಕಾರ 522 ರ ಎತ್ತರದ ವರೆಗೆ ಭೂಮಿ ವರಿಹಾರ ಧನವನ್ನು ನೀಡಲು ಹಿಂದಿನ ಸರಕಾರ ನಿರ್ಧಾರ ಮಾಡಿರುತ್ತದೆ ಹಳ್ಳಿಗಳಲ್ಲಿ ಕೆಲವು ಜಾಮೀನುಗಳಿಗೆ 11(1) ಮತ್ತು 9 (1) ರೈತರಿಗೆ ನೋಟಿಸ್ ನೀಡಿದ್ದಾರೆ ಸರ್ಕಾರ ಅದರ ಪರಿಹಾರ ಧನವನ್ನು ನೀಡಿಲ್ಲ ಎಂದು ದೂರಿದರು.

524 ,256 ಸರ್ವೆ ಕಾರ್ಯ ನಿರ್ವಹಿಸಿದ್ದಾರೆ ತಾಲೂಕಿನ ಸುಮಾರು 20 ಗ್ರಾಮಗಳು ಆಲಮಟ್ಟಿ ಹಿನ್ನೆರಿನ ಮುಳಗಡೆಗೆ ಗುರ್ತಿಸಿದ ಜಮೀನುಗಳಿಗೆ 9(1) ನೋಟಿಸ್ ನೀಡಿದ್ದು ಇರುತ್ತದೆ ಎಂದು ಇಂದು ಬೆಳಗ್ಗೆ ರೈತರ ನಿಯೋಗ ಬಾಗಲಕೋಟೆ ಉಸ್ತುವಾರಿ ಸಚಿವರು ಮತ್ತು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಗೃಹ ಕಚೇರಿಯಲ್ಲಿ ಬೆಟ್ಟಿಯಾಗಿ ಅಂಕಿ ಅಂಶಗಳು ಮೂಲಕ ರೈತರು ಸಚಿವರಿಗೆ ವಿವರಿಸಿದರು,


ಅಲ್ಲದೆ ಇದೆ ಡಿಸೆಂಬರ್ 4 ರಂದು ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಈ ಕುರಿತು ರೈತರೊಂದಿಗೆ ಸಭೆ ನಡೆಸಿ ಬೆಳಗಾವಿ ಸುವರ್ಣ ಸೌಧ ಅಧಿವೇಶನದಲ್ಲಿ ಚರ್ಚಿಸಲು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಮುತ್ತು ದೇಸಾಯಿ, ಚಂದು ಕೊರಡ್ಡಿ ವೆಂಕಣ್ಣ ಗಿಡಪ್ಪನವರ ,ನಾಗೇಶ್ ಅಪ್ಪಸಾಹೇಬ ಲಕ್ಕಮ, ಜಿ ಡಿ ದೇಸಾಯಿ ಸೇರಿದಂತೆ ಇನ್ನಿತರ ರೈತರು ಇದ್ದರು

Spread the informaton
Previous post

ಸೌಹಾರ್ದ ಕ್ರಿಕೆಟ್‌ ಟ್ರೋಪಿ ಬೀದರನಲ್ಲಿ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ ನೇತೃತ್ವದ ತಂಡ ಅದ್ಭುತ ಗೆಲುವು.

Next post

ಗದಗನಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಹೇಳಿಕೆ.ಲೋಕಸಭೆ ಚುನಾವಣೆಗೆ ಹಿರಿಯ ಸಚಿವರನ್ನ ಕಣಕ್ಕಿಳಿಸುವ ವಿಚಾರ..

Post Comment

You cannot copy content of this page