Loading Now

ರಾಜ್ಯ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೂತನ ಪದಾಧಿಕಾರಿ ಪದಗ್ರಹಣ.

ರಾಜ್ಯ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೂತನ ಪದಾಧಿಕಾರಿ ಪದಗ್ರಹಣ.

ರಾಜ್ಯ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವರ್ಷದ ಡೈರಿ ಬಿಡುಗಡೆ ಸಮಾರಂಭ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವರವರು ಮೊದಲಿಗೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಡೈರಿ ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಹೊರಗುತ್ತಿಗೆ ನೌಕರರ ಸಮಸ್ಯೆಗಳ ನಿವಾರಣೆಗೆ ವಿಧಾನ ಪರಿಷತ್ ಸದಸ್ಯನಾಗಿ ಯಾವಗಲೂ ನಾನು ಸಿದ್ದನಿದ್ದೇನೆ ಅವರ ಪರವಾಗಿ ಯಾವುದೇ ಸಂದರ್ಭದಲ್ಲಿ ಸದಾ ನಿಲ್ಲಲು ತಯಾರಿದ್ದೇನೆ, ಸರ್ಕಾರದಿಂದ ಅವರಿಗೆ ನ್ಯಾಯಯುತವಾಗಿ ದೊರಕ ಬೇಕಾದ ವೇತನ, ಸವಲತ್ತುಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸುವ ಕುರಿತು ಅಧಿವೇಶನ ಸಂದರ್ಭದಲ್ಲಿ ಒತ್ತಡ ಹೇರುವುದಾಗಿ ಭರವಸೆ ನೀಡಿದರು”.

ರಾಜ್ಯ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ ಮಾತನಾಡಿ, ಹೊರಗುತ್ತಿಗೆ ನೌಕರರ ಸಂಘ ಎಲ್ಲ ಇಲಾಖೆಗಳ ನೌಕರರನ್ನು ಒಳಗೊಂಡಿದೆ.ಪ್ರಸ್ತುತ ಸಂಘದಲ್ಲಿ 800 ಮಂದಿ ಸದಸ್ಯರಿದ್ದು ರಾಜ್ಯದಲ್ಲಿರುವ 73ಸಾವಿರ ಹೊರಗುತ್ತಿಗೆ ನೌಕರರಿದ್ದು ಅವರೆಲ್ಲರನ್ನು ಸಂಘದ ಸದಸ್ಯರನ್ನಾಗಿ ಹೊಂದುವುದು ನಮ್ಮ ಗುರಿಯಾಗಿದೆ. ಹೊರಗುತ್ತಿಗೆ ನೌಕರರ ವೇತನ ಸೇರಿದಂತೆ ಅನೇಕ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಮಟ್ಟಕ್ಕೆ ಕೊಂಡೊಯ್ಯಲು ಈ ಸಂಘವನ್ನು ಹುಟ್ಟು ಹಾಕಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಕಚೇರಿಯಲ್ಲಿ ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ನೌಕರರು ಕೆಲಸ ನಿರ್ವಹಿಸುತ್ತಿದ್ದು ಸೇವಾ ಭದ್ರತೆ,ಕನಿಷ್ಠ ವೇತನ, GST ವೇತನದಲ್ಲಿ ಕಡಿತ, ವೇತನ ವಿಳಂಬ ಹಾಗೂ ಮೇಲಾಧಿಕಾರಿಗಳ ಕಿರುಕಳ ಇವೆಲ್ಲವೂ ಹೋರಗುತ್ತಿಗೆ ನೌಕರರು ಎದುರಿಸುತ್ತಿದ್ದು ಈ ವಿಷಯದ ಕುರಿತು ಯಾವುದೇ ಅಧಿಕಾರಿ ಅಥವಾ ಸರ್ಕಾರ ಚರ್ಚಿಸದೆ ಕಣ್ಣು ಮುಚ್ಚಿ ಕುಳಿತಿರುವುದು ಕಂಡುಬರುತ್ತದೆ. ಸಾರ್ವಜನಿಕ ರಜೆ ಇಲ್ಲದೆ, ಕಡಿಮೆ ವೇತನ, ಕೆಲಸದ ವೇಳೆಯನ್ನು ಪಾಲಿಸದೆ ಇರುವುದು, ತುಟ್ಟಿ ಭತ್ಯೆ ಹಾಗೂ ಓವರ್ ಟೈಂ ಡ್ಯೂಟಿ ವೇತನವನ್ನು ನೀಡದೆ ವೇತನದಲ್ಲಿ ವಿಳಂಬ ಹೀಗೆ ಹಲವು ಸಮಸ್ಯೆಗಳನ್ನು ಇಲ್ಲಿಯವರೆಗೆ ಯಾವುದೆ ಅಧಿಕಾರಿಗಳು ಹಾಗೂ ಸರ್ಕಾರ ಲೆಕ್ಕಿಸದೆ ನೌಕರರ ಮೇಲೆ ಮಲತಾಯಿ ಧೋರಣೆಯನ್ನು ಪಾಲಿಸುತ್ತಿದ್ದು. ಈ ಕುರಿತು ಹಲವು ಭಾರಿ ಸದನದಲ್ಲಿ ಚರ್ಚಿಸಿದರು ಕರ್ಯರೂಪಕ್ಕೆ ತರದೆ ತಳ್ಳಿಹಾಕಲಾಗಿತ್ತು.

ಹೊರಗುತ್ತಿಗೆ ನೌಕರರು ಸೇರಿ ಈ ಕುರಿತು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ ತಲೆ ಎತ್ತಿದೆ.

Spread the informaton

Post Comment

You cannot copy content of this page