Loading Now

I Love U ಎಂದು ಪ್ರಪೋಸ್‌ ಮಾಡಿದ ಸಂಗೀತಾ: ನನಗೆ ಜೀವನದಲ್ಲಿ ಗುರಿಯಿದೆ ಎಂದ ಡ್ರೋನ್ ಪ್ರತಾಪ್!

I Love U ಎಂದು ಪ್ರಪೋಸ್‌ ಮಾಡಿದ ಸಂಗೀತಾ: ನನಗೆ ಜೀವನದಲ್ಲಿ ಗುರಿಯಿದೆ ಎಂದ ಡ್ರೋನ್ ಪ್ರತಾಪ್!

ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದ ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ.


ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದ ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್- ಸಂಗೀತಾ, ಇಶಾನಿ- ಮೈಕಲ್, ನಮ್ರತಾ-ಸ್ನೇಹಿತ್ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್- ಸಂಗೀತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವಾಗಲೇ ಕಾರ್ತಿಕ್‌ಗೆ ಕೈ ಕೊಟ್ಟು ಡ್ರೋನ್ ಪ್ರತಾಪ್‌ಗೆ ಚಾರ್ಲಿ ನಟಿ ಪ್ರಪೋಸ್ ಮಾಡಿದ್ದಾರೆ. ಪ್ರತಾಪ್‌ಗೆ ನಿನ್ನ ಹುಡುಗಿ ನಾನೇ ಒಪ್ಪಿಕೋ ಅಂತ ಕ್ಯೂಟ್ ಕ್ಯೂಟ್ ಆಗಿ ನಟಿ ಪ್ರೇಮ ನಿವೇದನೆ ಮಾಡಿದ್ದಾರೆ.

ನಿಮ್ಮ ಬದುಕಿನಲ್ಲಿ ಮುಂದೆ ಹುಡುಗಿ ಬಂದರೆ ಪ್ರತಾಪ್ ಉತ್ತರ ಏನಾಗಿರುತ್ತೆ ಅಂತ ಪ್ರತಾಪ್‌ ಜೊತೆ ಮಾತುಕತೆ ನಡೆದಿದೆ. ಅದಕ್ಕೆ ಅಯ್ಯೋ ನನ್ನ ಬಿಡಮ್ಮ, ನನಗೆ ಜೀವನದಲ್ಲಿ ಗುರಿ ಇದೆ. ನನ್ನ ಕೆರಿಯರ್ ಕಡೆ ನೋಡಬೇಕು ಅಂತೀನಿ, ಅಪ್ಪ ನೋಡಿದ ಹುಡುಗಿನಾ ಮದುವೆ ಆಗ್ತೀನಿ ಎಂದು ಹೇಳ್ತೀನಿ ಎಂದು ಪ್ರತಾಪ್ ರಿಯಾಕ್ಟ್ ಮಾಡಿದ್ದಾರೆ. ಈಗ ನಾನೇ ಆ ಹುಡುಗಿ, ನಿಮ್ಮ ಅಪ್ಪನ ನಾನು ಒಪ್ಪಿಸುತ್ತೇನೆ ಎಂದು ಪ್ರತಾಪ್‌ಗೆ ಸಂಗೀತಾ ಹೇಳಿದ್ದಾರೆ. ಅವರ ಮಾತು ಕೇಳಿ ಪ್ರತಾಪ್ ನಾಚಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಸಂಗೀತಾ ಕಾಡಿಸಿದ್ರೆ, ನನಗೆ ಇಷ್ಟ ಇಲ್ಲಪ್ಪಾ ಎಂದು ಪ್ರತಾಪ್ ಕೈ ಮುಗಿದಿದ್ದಾರೆ.

ಅಭಿಮಾನಿಗಳು ಫಿದಾ ಆಗಿದ್ದಾರೆ.

Spread the informaton

Post Comment

You cannot copy content of this page