Loading Now

ಹಾಸನದ ತಹಶೀಲ್ದಾರ್ ಶ್ವೇತಾ ಬಂಧನಕ್ಕೆ ಕೋರ್ಟ್ ಆದೇಶ.

ಹಾಸನದ ತಹಶೀಲ್ದಾರ್ ಶ್ವೇತಾ ಬಂಧನಕ್ಕೆ ಕೋರ್ಟ್ ಆದೇಶ.

ಸಿವಿಲ್ ಪ್ರಕರಣವೊಂದರಲ್ಲಿ ಸ್ಪಷ್ಟನೆ ನೀಡಲು ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ತಹಸೀಲ್ದಾ‌ರ್ ಶ್ವೇತಾ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಹಿರಿಯ ಸಿವಿಲ್ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಕೀಲರು ಹಾಗೂ ಕೋರ್ಟ್‌ ಶಿರಸ್ತೇದಾರ್ ಬಂಧಿಸಲು ತಹಸೀಲ್ದಾರ್‌ ಕಚೇರಿಗೆ ತೆರಳಿದಾಗ ಶ್ವೇತಾ ಕಚೇರಿಯಲ್ಲಿ ಇರಲಿಲ್ಲ. ಜಮೀನು ಪಾಲುದಾರಿಕೆ ಪ್ರಕರಣ ಸಂಬಂಧ ಪೋಡಿ ಮಾಡಿಕೊಡುವಂತೆ ತಹಸೀಲ್ದಾರ್‌ಗೆ ನ್ಯಾಯಾಲಯ ತಿಳಿಸಿತ್ತು. ಪೋಡಿ ಮಾಡಿಕೊಡಲು ತಹಸೀಲ್ದಾ‌ರ್ ವಿಫಲವಾಗಿದ್ದರು. ಈ ಬಗ್ಗೆ ಕೋರ್ಟ್ ಸ್ಪಷ್ಟನೆ ಕೇಳಿ ಹಲವು ನೋಟಿಸ್‌ಗಳನ್ನು ನೀಡಲಾಗಿತ್ತು. ಆ ನಂತರವೂ ಕೋರ್ಟ್‌ಗೆ ಹಾಜರಾಗದ ಕಾರಣ ನ್ಯಾಯಾಲಯ ತಹಸೀಲ್ದಾ‌ರ್ ಬಂಧನಕ್ಕೆ ಆದೇಶ ನೀಡಿದೆ.

 

ಸಿವಿಲ್‌ ಕೇಸ್ ನಲ್ಲಿ (Civil case) ಸಾಕ್ಷ್ಯ ಹೇಳಲು ಕೋರ್ಟ್‌ಗೆ (Court) ಹಾಜರಾಗದ ಆರೋಪ ಹಿನ್ನೆಲೆಯಲ್ಲಿ ಹಾಸನ (Hassan) ತಹಶೀಲ್ದಾರ್ (Tehsildar) ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸಲು ನ್ಯಾಯಾಲಯದ ಆದೇಶ ನೀಡಿದೆ. ನ್ಯಾಯಾಲಯಕ್ಕೆ ಗೈರು (Absent) ಹಾಗೂ ಸಮನ್ಸ್ (Summons) ಪಡೆಯದ ಆರೋಪದಲ್ಲಿ ತಹಶೀಲ್ದಾರ್ ಬಂಧನಕ್ಕೆ ಕೋರ್ಟ್ ವಾರೆಂಟ್ ಹೊರಡಿಸಿದ್ದು, ಕೋರ್ಟ್ ಆದೇಶದ ಹಿನ್ನೆಲೆ ತಹಶೀಲ್ದಾರ್ ಕರೆದುಕೊಂಡ ಹೋಗಲು ವಕೀಲರು (Lawyers) ಹಾಗೂ ಕೋರ್ಟ್ ಸಿಬ್ಬಂದಿ ಅಧಿಕಾರಿ ಕಚೇರಿಗೆ ಆಗಮಿಸಿದ ಘಟನೆ ನಡೆಯಿತು.

ಹಾಸನದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಬಂಧನ ಆದೇಶ ನೀಡಿದ್ದು, ಕೋರ್ಟ್ ಶಿರಸ್ತೇದಾರ್ ಜೊತೆ ತಹಶೀಲ್ದಾರ್ ಬಂಧನಕ್ಕೆ ವಕೀಲರು ಆಗಮಿಸಿದ್ದರು. ಆದರೆ ಬಂಧಿಸಲು ಬಂದ ವೇಳೆ ಕಚೇರಿಯಲ್ಲಿ ತಹಶೀಲ್ದಾರ್ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ತಹಶೀಲ್ದಾರ್ ಇಲ್ಲದ ಕಾರಣ ಕಚೇರಿಯಲ್ಲಿದ್ದ ಆಡಳಿತ ಶಿರಸ್ತೇದಾರ್‌ ಕೆ.ಕೆ.ತಿಮ್ಮಯ್ಯ ಅವರಿಗೆ ವಕೀಲರು ತರಾಟೆ ತೆಗೆದುಕೊಂಡರು.

Spread the informaton
Previous post

ಗದಗನಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಹೇಳಿಕೆ.ಲೋಕಸಭೆ ಚುನಾವಣೆಗೆ ಹಿರಿಯ ಸಚಿವರನ್ನ ಕಣಕ್ಕಿಳಿಸುವ ವಿಚಾರ..

Next post

ಆಕಾಶ ನೀಲಿ ಆಗಿದ್ದು ಯಾಕೆ? ಕೆಲವು ವರ್ಷಗಳ ಬಳಿಕ ಮತ್ತೆ ಬೇರೆ ಬಣ್ಣ ಬರುತ್ತಂತೆ ನಿಜಾನಾ ? ರಹಸ್ಯವನ್ನು ಬಿಚ್ಚಿಡುವುದು

Post Comment

You cannot copy content of this page