Loading Now

ಡಾ. ಭೀಮಣ್ಣಾ ಖಂಡ್ರೆ ಜನ್ಮ ಶತಮಾನೋತ್ಸವ ! ಬೀದರ್ ಜಿಲ್ಲೆಯಲ್ಲಿ ಅನ್ಯ ಭಾಷೆ ಪದಬಳಕೆ.!

ಡಾ. ಭೀಮಣ್ಣಾ ಖಂಡ್ರೆ ಜನ್ಮ ಶತಮಾನೋತ್ಸವ ! ಬೀದರ್ ಜಿಲ್ಲೆಯಲ್ಲಿ ಅನ್ಯ ಭಾಷೆ ಪದಬಳಕೆ.!

 

ಬೀದರ : ಲೋಕ ನಾಯಕ ಡಾ. ಭೀಮಣ್ಣಾ ಖಂಡ್ರೆ ಜನ್ಮ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮ ಹಿನ್ನೆಲೆಯಲ್ಲಿ.ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು ಬೀದರ ಜಿಲ್ಲೆಗೆ ಆಗಮಸಲಿದ್ದಾರೆ. ಆದಕಾರಣ ಹಲವೆಡೆ ದೊಡ್ಡ ದೊಡ್ಡ ಬ್ಯಾನರ್ ಅಳವಡಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಬೆಳಿಗ್ಗೆ 11:೦೦ ಗಂಟೆಗೆ ವಿಶೇಷ ವಿಮಾನ ಮೂಲಕ ಮಧ್ಯಾಹ್ನ 12:15ಕ್ಕೆ ಬೀದರ ಏರ್ ಬೇಸ್ ಆಗಮಿಸಿ ಬೀದರನಿಂದ ವಿಶೇಷ ಹೆಲಿಪ್ಯಾಡ್-1 ಮೂಲಕ ಮಧ್ಯಾಹ್ನ 1:೦೦ಗಂಟೆಗೆ ಭಾಲ್ಕಿಗೆ ಆಗಮನ.

ದೆಹಲಿ ಯಿಂದ ವಿಶೇಷ ವಿಮಾನ ಮೂಲಕ ಬೀದರ ಏರ್ ಬೇಸ್ ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದು.ಲೋಕ ನಾಯಕ ಡಾ. ಭೀಮಣ್ಣಾ ಖಂಡ್ರೆ ಅವರ ಜನ್ಮ ಶತಮಾನೋತ್ಸವ ಸಮಾರಂಭ
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಬಿಕೆಐಟಿ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಅವರ ಲೋಕನಾಯಕ ಅಭಿನಂದನಾ ಗ್ರಂಥ ಬಿಡುಗಡೆ, ಮತ್ತು ಶತಮಾನೋತ್ಸವ.

ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಿಗರು ಕಣ್ಣು ಮುಚ್ಚಿ ಕುಳಿತಿರುವುದು ಆಶ್ಚರ್ಯ ಹಾಗೂ ಅನುಮಾನ ಪಡುವ ವಿಷಯವಾಗಿದೆ.

ಹೌದು ಮೊನ್ನೆ ತಾನೆ ಸಮಾಜಿಕ ಜಾಲತಾಣದಲ್ಲಿ ಒಬ್ಬ ಬೇರೆ ರಾಜ್ಯದ ವ್ಯಾಪಾರಿ ತನ್ನ ಚಿಕ್ಕ ಗಾಡಿಯಲ್ಲಿ ತಾನು ಹಾಗೂ ತನ್ನ ಕುಟುಂಬ ಬದುಕಲು ಉರು ಊರಿಗೆ ತೆರಳಿ ವ್ಯಾಪಾರ ಮಾಡುವ ಆತನಿಗೆ ಒಬ್ಬ ಕನ್ನಡಿಗ ಆತ ತನ್ನ ಗಾಡಿಯ ಮೇಲೆ ಹಿಂಧಿ ಭಾಷೆಯ ಬ್ಯಾನರ್ ಅಳವಡಿಸಿದ್ದಕ್ಕೆ ಆತನನ್ನು ನಿಂದಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು ಕೆಲವರು ಮೆಚ್ಚಿದರೆ ಇನ್ನೂ ಕೆಲವರು ನಾಟಕೀಯ ಭಾವನೆ ತೋರಿಸಿದ್ದಕ್ಕೆ ತೆಗಳಿದರು ಇಂತಹ ಸೋ ಕಾಲ್ಡ್ ಕನ್ನಡ ಪರ ಹೋರಟಗಾರರು ಹಾಗೂ ಕನ್ನಡ ಭಾಷೆಯ ಬಗ್ಗೆ ಅತ್ಯಂತ ಪ್ರೀತಿ ತೋರಿಸುವವರು ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಹಾಗೂ ನಮ್ಮ ರಾಜ್ಯವನ್ನು ಪ್ರತನಿಧಿಸುತ್ತಿರುವ ಗಣ್ಯರು ಕರ್ನಾಟಕ ರಾಜ್ಯದ ಜಿಲ್ಲೆಯಲ್ಲಿ ತಮ್ಮ ಸಮಾರಂಭಕ್ಕೆ ಇಂಗ್ಲಿಷ್ ಭಾಷೆ ಬಳಸಿರುವುದು ಎಷ್ಟು ಸರಿ.ಇದಕ್ಕೆ ಕರ್ನಾಟಕ ಜನತೆಯು ಎಚ್ಚೆತ್ತುಕೊಳ್ಳಬೇಕಿದೆ ಎಲ್ಲಿ ಬಡವರು ಹಾಗೂ ಅಸಹಾಯಕರ ಮೇಲೆ ಕನ್ನಡ ಬಳಕೆ ಹೇರಲಾಗುತ್ತದೆಯೋ ಅವರು ರಾಜಕಾರಣಿಯವರ ಸಮಾರಂಭದಲ್ಲಿಯೂ ಸಹ ಕನ್ನಡ ಪರ ಸಂಘಟನೆಗಳು ಹೋರಾಟಗಾರರು ಇದರ ವಿರುದ್ಧ ಧ್ವನಿ ಎತ್ತುವುದು ಅವಶ್ಯವಿದೆ.

Spread the informaton

Post Comment

You cannot copy content of this page