Loading Now

ಬೈಲಹೊಂಗಲ ಅಸಿಸ್ಟೆಂಟ್ ಕಮಿಷನರ್ ಸಿಬ್ಬಂದಿ ಲೋಕಾಯುಕ್ತ ಟ್ರಾಪ್

ಬೈಲಹೊಂಗಲ ಅಸಿಸ್ಟೆಂಟ್ ಕಮಿಷನರ್ ಸಿಬ್ಬಂದಿ ಲೋಕಾಯುಕ್ತ ಟ್ರಾಪ್

ಬೈಲಹಂಗಲ : ಕರ್ನಾಟಕ ಲೋಕಾಯುಕ್ತವು ಭಾರತದ ಕರ್ನಾಟಕ ರಾಜ್ಯದಲ್ಲಿನ ಭ್ರಷ್ಟಾಚಾರ-ವಿರೋಧಿ ಒಂಬುಡ್ಸ್‌ಮನ್ ಸಂಸ್ಥೆಯಾಗಿದೆ. ಬೈಲಹೊಂಗಲ ತಾಲೂಕಿನ ಅಸಿಸ್ಟೆಂಟ್ ಕಮಿಷನರ್ ಸಿಬ್ಬಂದಿ ಶ್ರೀ ಮಂಜುನಾಥ ಅಂಗಡಿ ದ್ವಿತೀಯ ದರ್ಜೆ ಸಹಾಯಕರು ಬೈಲಹೊಂಗಲ 60 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪಹಣಿ ಪತ್ರದ ತಿದ್ದುಪಡಿಗೆ ಮಂಜುನಾಥ 90 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಎಸ್‌ಕೆ ಗ್ರಾಮದ ರವಿ ಅಜ್ಜಿಯವರು ಪಹಣಿ ಪತ್ರ ತಿದ್ದುಪಡಿಗೆ ಎಂದು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪಹಣಿ ಪತ್ರ ತಿದ್ದುಪಡಿ ಮಾಡಲು ಮಂಜುನಾಥ ಅಂಗಡಿಯವರು 90 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಬೆಳಗಾವಿ ಲೋಕಾಯುಕ್ತ ಠಾಣೆಗೆ ರವಿ ಅಜ್ಜಿ ದೂರು ನೀಡಿದ್ದರು.

ಲೋಕಾಯುಕ್ತ ಎಸ್ಪಿ ಹನುಮಂತರಾಯ, ಡಿವೈಎಸ್‌ಪಿ ಬಿ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್‌ಐ ಅನ್ನಪೂರ್ಣ ಹುಲಗೂರ ನೇತೃತ್ವದ ತಂಡದಿಂದ ಮದ್ಯಾಹ್ನ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

 

Spread the informaton

Post Comment

You cannot copy content of this page