Loading Now

ಕರ್ನಾಟಕ ಅರಣ್ಯ ಇಲಾಖೆಯ 540 ರಕ್ಷಕರ ಹುದ್ದೆಗೆ ಅಧಿಸೂಚನೆ: ಅರ್ಜಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಕರ್ನಾಟಕ ಅರಣ್ಯ ಇಲಾಖೆಯ 540 ರಕ್ಷಕರ ಹುದ್ದೆಗೆ ಅಧಿಸೂಚನೆ: ಅರ್ಜಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಕರ್ನಾಟಕ ಫಾರೆಸ್ಟ್‌ ಡಿಪಾರ್ಟ್‌ಮೆಂಟ್‌ ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ಅರಣ್ಯ ರಕ್ಷಕ) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಸಂಪೂರ್ಣ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.

ಹೈಲೈಟ್ಸ್‌:

  • ಫಾರೆಸ್ಟ್‌ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.
  • 540 ಹುದ್ದೆಗಳ ಭರ್ತಿಗೆ ಅಧಿಸೂಚನೆ.
  • ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆ ದಿನ.
KFD Forest Guard Recruitment 2023
ಫಾರೆಸ್ಟ್‌ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 (506 ಸರ್ಕಾರವು ಅನುಮತಿಸಿದ ಹುದ್ದೆ +34 ಹಿಂದಿನ ಅಧಿಸೂಚನೆಯಲ್ಲಿನ ಹಿಂಬಾಕಿ ಹುದ್ದೆಗಳು) ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ‘ಅರಣ್ಯ ರಕ್ಷಕ) ಗ್ರೂಪ್‌ ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಡಿಸೆಂಬರ್ 01 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಡಿಸೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಅರ್ಹತೆ, ವೇತನ ಶ್ರೇಣಿ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿಸಲಾಗಿದೆ.

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು : ಅರಣ್ಯ ರಕ್ಷಕರು (ಗಸ್ತು ಅರಣ್ಯ ಪಾಲಕರು)
ಒಟ್ಟು ಹುದ್ದೆಗಳ ಸಂಖ್ಯೆ : 540
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://kfdrecruitment.in/

ಅರಣ್ಯ ರಕ್ಷಕರ ಹುದ್ದೆಗೆ ಶೈಕ್ಷಣಿಕ ಅರ್ಹತೆ
ಅಧಿಸೂಚನೆಯ ದಿನಾಂಕದೊಳಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಾಸ್‌ ಮಾಡಿರಬೇಕು. ಅರ್ಜಿ ಸಲ್ಲಿಕೆ ವೇಳೆ ಆನ್‌ಲೈನ್‌ನಲ್ಲಿ ಅಂಕಪಟ್ಟಿಗಳ ಅಪ್‌ಲೋಡ್‌ ಮಾಡಬೇಕಿರುತ್ತದೆ.

ಅರಣ್ಯ ರಕ್ಷಕರ ಹುದ್ದೆಗೆ ವಯಸ್ಸಿನ ಅರ್ಹತೆ
ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ SC / ST / CAT-1 ಅಭ್ಯರ್ಥಿಗಳಿಗೆ 32 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ

Spread the informaton

Post Comment

You cannot copy content of this page